Thursday, June 29, 2017

ಅಡಿಗೆಯನು ಮಾಡಬೇಕಣ್ಣ (ರಾಗ - ಪಂತುರಾಳಿ, ತಾಳ - ಛಾಪು) - ಕನಕ ದಾಸರ ಕೀರ್ತನೆಗಳು

ಅಡಿಗೆಯನು ಮಾಡಬೇಕಣ್ಣ ನಾನೀಗ ಸುಜ್ಞಾನದ
ಅಡಿಗಯ ಮಾಡಬೇಕಣ್ಣ

ಅಡಿಗೆಯನು ಮಾಡಬೇಕು ಮಡಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ

ತನ್ನ ಗುರುವನ್ನು ನೆನೆಯಬೇಕಣ್ಣ ತನುಭಾವವೆಂಬ
ಭಿನ್ನ ಕಲ್ಮಷವಳಿಯಬೇಕಣ್ಣ
ಒನಕೆಯಂದ ಕುಟ್ಟಿ ಕೇರಿ ತನಗೆ ತಾನೆ ಆಗ ಕೆಚ್ಚ
ನನುವರಿತು ಇಕ್ಕಬೇಕಿ ಅರಿವರ್ಗವೆಂಬ ತುಂಟರಳಿಸಿ || 1 ||

ತತ್ವಭಾಂಡವ ತೊಳೆಯಬೇಕಣ್ಣ ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು
ಹತ್ತಿಕೊಂಡಿಹ ಮಮತೆಯನ್ನು ಎತ್ತಿ ಎತ್ತಿ ಎಸರ ಹಿಂಗಿಸುತಲಿ || 2 ||

ಜನನ ಸೊಂಡಿಗೆ ಹುರಿಯಬೇಕಣ್ಣ ನಿಜವಾಗಿ ನಂತು
ತನುವು ತುಪ್ಪವ ಕಾಸಬೇಕಣ್ಣ
ಕನಕಗರಿ ನೆಲೆಯಾದಿಕೇಶವದಾಸ ಕನಕನ ಕಟ್ಟಳೆಯೊಳು
ನಿಂತು ಸುಖದಪಾಕವನು ಚಂದದಿ ಸವಿದುಣ್ಣಸಿಕ್ಕೆ || 3 ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment