ಆರು ಬಲ್ಲರು ಹರಿ ಹರರ
ಮಹಿಮೆಯನು
ವಾರಿಜೋದ್ಭವ
ಸುರೇಂದ್ರಾದಿಗಳಿಗಳವಲ್ಲ || ಪ ||
ಪೌರತ್ರಯ ಗೆಲುವ ಸಮಯದಲಿ
ತಪವಮಾಡಿ
ನಾರಾಯಣಾಸ್ತ್ರವನು
ಪಡೆದನೀಶ
ಗೌರೀಮನೋಹರನ
ಘನತರಾರ್ಚನೆಗೈದು
ಚಾರುತರ
ಚಕ್ರವನು ಪಡೆದನಾ ಶೌರಿ || ೧ ||
ಬಲಿ
ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ-
ಗಿಲಕಾಯ್ದನಚ್ಯುತನು
ಅನುಗಾಲದಿ
ಬಲುಭುಜನ ಬಾಣಾಸುರನ
ಗೃಹದ್ವಾರವನು
ಬಳಸಿ
ಕಾಯ್ದನು ಹರನು ವರವ ತಾನಿತ್ತು || ೨ ||
ಭೋಗಿಶಯನನು ಆಗಿ
ಭೋಗಿಭೂಷಣನಾಗಿ
ವಾಗೀಶನಾಗಿ ಸೃ್ಷ್ಠಿ
ಸ್ಥತಿ ಲಯಗಳಿಂಗೆ
ಆಗು ಕಾರಣ ಕಾರ್ಯ ಕರ್ಮಾದಿ
ರೂಪಕ್ಕೆ
ಕಾಗಿನೆಲೆಯಾದಿಕೇಶವನ
ಮಹಿಮೆಯನು || ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment