ಈಶ ನಿನ್ನ
ಚರಣ ಭಜನೆ ಆಶೆಯಿಂದ ಮಾಡುವೆನು
ದೋಷರಾಶಿ
ನಾಶ ಮಾಡು ಶ್ರೀಶ ಕೇಶವ || ೧ ||
ಶರಣು
ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ
ಚರಣ
ಸ್ಮರಣೆ ಕರುಣಿಸಯ್ಯ ನಾರಾಯಣ || ೨ ||
ಶೋಧಿಸೆನ್ನ
ಭವದ ಕಲುಶ ಬೋಧಿಸಯ್ಯ ಜ್ಞಾನವೆನಗೆ
ಬಾಧಿಸುವ
ಯಮನ ಬಾಧೆ ಬಿಡಿಸು ಮಾಧವ || ೩ ||
ಹಿಂದನೇಕ
ಯೋನಿಗಳಲಿ ಬಂದು ಬಂದು ನೊಂದೆನಯ್ಯ
ಇಂದು
ಭವದ ಬಂಧ ಬಿಡಿಸು ತಂದೆ ಗೋವಿಂದಾ || ೪
||
ಭ್ರಷ್ಟವೆನಿಸಬೇಡ
ಕೃಷ್ಣ ಇಷ್ಟು ಮಾತ್ರ ಬೇಡಿಕೊಂಬೆ
ಶಿಷ್ಟರೊಡನೆ
ಇಟ್ಟು ಕಷ್ಟ ಬಿಡಿಸು ವಿಷ್ಣುವೇ || ೫
||
ಮದನನಯ್ಯ
ನಿನ್ನ ಮಹಿಮೆ ವದನದಲ್ಲಿ ನುಡುಯುವಂತೆ
ಹೃದಯದೊಳಗೆ
ಹುದುಗಿಸಯ್ಯ ಮಧುಸೂದನಾ || ೬ ||
ಕವಿದುಕೊಂಡು
ಇರುವ ಪಾಪ ಸವೆದುಪೋಗುವಂತೆ ಮಾಡೊ
ಜವನ
ಬಾಧೆಯನ್ನ ಬಿಡಿಸು ಶ್ರೀ ತ್ರಿವಿಕ್ರಮಾ || ೭ ||
ಕಾಮಜನಕ
ನಿನ್ನ ನಾಮ ಪ್ರೇಮದಿಂದ ಪಾಡುವಂತೆ
ನೇಮವೆನಗೆ
ಪಾಲಿಸಯ್ಯ ಸ್ವಾಮಿ ವಾಮನಾ || ೮ ||
ಮೊದಲು
ನಿನ್ನ ಪಾದಪೂಜೆ ಒದಗುವಂತೆ ಮಾಡೊ ಎನ್ನ
ಹೃದಯದಲ್ಲಿ
ಸದನ ಮಾಡೊ ಮುದದಿ ಶ್ರೀಧರ || ೯ ||
ಹುಸಿಯನಾಡಿ
ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ
ಹಾಕದೀರಯ್ಯಾ ಹೃಷೀಕೇಶನೇ || ೧೦ ||
ಬಿದ್ದು
ಭವದನೇಕ ಜನುಮ ಬದ್ಧನಾಗಿ ಕಲುಶದಿಂದ
ಗೆದ್ದುಪೋಪ
ಬುದ್ಧಿ ತೋರೊ ಪದ್ಮನಾಭನೇ || ೧೧ ||
ಕಾಮ ಕ್ರೋಧ
ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೊ
ಶ್ರೀ
ಮಹಾನುಭಾವನಾದ ದಾಮೋದರಾ || ೧೨ ||
ಪಂಕಜಾಕ್ಷ
ನೀನು ಎನ್ನ ಮಂಕು ಬುದ್ಧಿಯನ್ನು ಬಿಡಿಸಿ
ಕಿಂಕರನ್ನ
ಮಾಡಿಕೊಳ್ಳೊ ಸಂಕರುಷಣಾ || ೧೩ ||
ಏಸು ಜನುಮ
ಬಂದರೇನು ದಾಸನಲ್ಲವೇನು ನಾನು
ಘಾಸಿ
ಮಾಡದಿರು ಎನ್ನ ವಾಸುದೇವನೇ || ೧೪ ||
ಬುದ್ಧಿ
ಶೂನ್ಯನಾಗಿ ಎನ್ನ ಬದ್ಧಕಾರ್ಯಕುಹಕ ಮನವ
ತಿದ್ದಿ
ಹೃದಯ ಶುದ್ಧಿ ಮಾಡೊ ಪ್ರದ್ಯುಮ್ನನೇ || ೧೫ ||
ಜನನಿ ಜನಕ
ನೀನೆ ಎಂದು ನೆನೆವೆನಯ್ಯ ದೀನಬಂಧು
ಎನಗೆ
ಮುಕ್ತಿ ಪಾಲಿಸಯ್ಯ ಅನಿರುದ್ಧನೇ || ೧೬
||
ಹರುಷದಿಂದ
ನಿನ್ನ ನಾಮ ಸ್ಮರಿಸುವಂತೆ ಮಾಡು ನೇಮ
ವಿರಿಸು
ಚರಣದಲ್ಲಿ ಪುರುಷೋತ್ತಮಾ || ೧೭ ||
ಸಾಧುಸಂಗ
ಕೊಟ್ಟು ನಿನ್ನ ಪಾದಭಜನೆಯಿಟ್ಟು ಎನ್ನ
ಭೇದ
ಮಾಡಿ ನೋಡದಿರೋ ಶ್ರೀ ಅಧೋಕ್ಷಜಾ || ೧೮
||
ಚಾರು ಚರಣ
ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ
ಹಾಕುತಿರುವೆ ನಿನಗೆ ನಾರಸಿಂಹನೇ || ೧೯
||
ಸಂಚಿತಾರ್ಥ
ಪಾಪಗಳನು ಕಿಂಚಿತಾದ ಪೀಡೆಗಳನು
ಮುಂಚಿತವಾಗಿ
ಕಳೆದು ಪೊರೆಯೊ ಸ್ವಾಮಿ ಅಚ್ಯುತಾ || ೨೦
||
ಜ್ಞಾನ
ಭಕ್ತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ
ಬುದ್ಧಿ ಬಿಡಿಸು ಮುನ್ನ ಶ್ರೀ ಜನಾರ್ಧನಾ || ೨೧ ||
ಜಪತಪನುಷ್ಟಾನವಿಲ್ಲದೆ
ಕುಪಥಗಾಮಿಯಾದ ಎನ್ನ
ಕೃಪೆಯಮಾಡಿ
ಕ್ಷಮಿಸಬೇಕು ಹೇ ಉಪೇಂದ್ರನೇ || ೨೨ ||
ಮೊರೆಯ
ಇಡುವೆನಯ್ಯ ನಿನಗೆ ಶರಧಿ ಶಯನ ಶುಭಮತಿಯ
ಇರಿಸು
ಭಕ್ತನೆಂದು ಪರಮ ಪುರುಷ ಶ್ರೀ ಹರೀ || ೨೩ ||
ಪುಟ್ಟಿಸಲೇಬೇಡ
ಇನ್ನು ಪುಟ್ಟಿಸಿದಕೆ ಪಾಲಿಸೆನ್ನ
ಇಷ್ಟು
ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣನೇ || ೨೪ ||
ಸತ್ಯವಾದ
ನಾಮಗಳನು ನಿತ್ಯದಲ್ಲಿ ಪಠಿಸುವವರ
ಅರ್ಥಿಯಿಂದ
ಸಲಹುವನು ಕರ್ತೃ ಕೇಶವ || ೨೫ ||
ಮರೆಯದೆಲೆ
ಹರಿಯ ನಾಮ ಬರೆದು ಓದಿ ಕೇಳಿದವಗೆ
ಕರೆದು
ಮುಕ್ತಿ ಕೊಡುವ ನೆಲೆಯಾದಿಕೇಶವಾ || ೨೬
||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment