ಆರು ಬಾಳಿದರೇನು ಆರು
ಬದುಕಿದರೇನು
ನಾರಾಯಣನ
ಸ್ಮರಣೆ ನಮಗಿಲ್ಲದನಕ || ಪ ||
ಉಣ್ಣ ಬರದವರಲ್ಲಿ
ಊರೂಟವಾದರೆ ಏನು
ಹಣ್ಣು ಬಿಡದ ಮರಗಳು
ಹಾಳಾದರೇನು
ಕಣ್ಣಿಲ್ಲದವಗಿನ್ನು
ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ
ಪ್ರೌಢಿಮೆ ಮೆರೆದರೇನು ? || ೧ ||
ಅಕ್ಕರಿಲ್ಲದವಗೆ
ಮ್ಕಳಿದ್ದು ಫಲವೇನು
ಹೊಕ್ಕು ನಡೆಯದ
ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು
ಇದ್ದರೇನು
ಮರ್ಕಟನ
ಕೈಯೊಳಗೆ ಮಾಣಿಕ್ಯವಿದ್ದರೇನು ? || ೨ ||
ಅಲ್ಪದೊರೆಗಳ ಜೀತ ಎಷ್ಟು
ಮಾಡಿದರೇನು
ಬಲ್ಪಂಥವಿಲ್ಲದವನ
ಬಾಳ್ವೆಯೇನು
ಕಲ್ಪಕಲ್ಪಿತ
ಕಾಗಿನೆಲೆಯಾದಿಕೇಶವನ
ಸ್ವಲ್ಪವೂ
ನೆನೆಯದ ನರನಿದ್ದರೇನು ? || ೩ ||
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment