Saturday, July 1, 2017

ಅಭ್ಯಾಸವನು ಮಾಡಬೇಕೋ (ರಾಗ - ಕನ್ನಡ, ತಾಳ - ಝಂಪೆ)

ಅಭ್ಯಾಸವನು ಮಾಡಬೇಕೋ-ಶ್ರೀಗು-
ರುಭ್ಯೋನಮಃ ಎಂಬ ನಾಮಂಗಳನು ಬಿಡದೆ ||  ||

ಕೇಶವ ನಾರಾಯಣ ಮಾಧವ ಗೋವಿಂದ ಭವ-
ನಾಶ ಭಕ್ತರ ಹೃದಯಕಮಲಾಬ್ಜ ದ್ಯುಮಣಿ
ದೋಷವಿರಹಿತ ವಿಷ್ಣು ಮಧುಸೂದನ ತ್ರಿವಿಕ್ರಮ ಸು-
ರೇಶ ಸರ್ವೋತ್ತಮ ನಮಂಗಳಂ ಬಿಡದೆ ||  ||

ವಾಮನ ಶ್ರೀಧರ ಹೃಷೀಕೇಶ ಕೇಶವ
ದಾಮೋದರ ಪ್ರಿಯದಾನವೇಂದ್ರ ಮುರಹರ
.........................................
ರಾಮರಘುಪುಂಗವ ನಾಮಗಳಂ ಬಿಡದೆ ||  ||

ಸಂಕರ್ಷಣ ವಾಸುದೇವ ಪ್ರದ್ಯುಮ್ನ ನಿಖಿ-
ಳಾಂಕ ಪಂಕೇರುಹ ಪತ್ರಾಯತಾಕ್ಷ
ಕಿಂಕರನ ರಕ್ಷಕ ಅನಿರುದ್ಧ ಪುರುಷೋತ್ತಮ
ಶಂಕರಪ್ರಿಯ ಅಧೋಕ್ಷಜ ನಾಮಂಗಳಂ ಬಿಡದೆ ||  ||

ನಾರಸಿಂಹಾಚ್ಯುತ ಜನಾರ್ಧನ ಉಪೇಂದ್ರ
ಸಾರಸಭವ ವಂದ್ಯ ಹರಿ ಕೃಷ್ಣ ವಿಶ್ವೋ-
ದ್ಧಾರ ...... ವನಮಾಲಿ ಆದಿ
ಮೂರುತಿಯ ದಿವ್ಯಮಂಗಳಂ ಬಿಡದೆ  ||  ||

ಅಸಮಪಟುಬಲಿಯ ಕಾಳಗದಿ ನುಂಗಿದ ಪಾದ
ರಸ ವಿರುದ್ಧ ತಾವಿಗೊದಗುವ ತೆರದೊಳು
ಬಿಸಜಾಕ್ಷ ಕಾಗಿನೆಲೆಯಾದಿಕೆಶವ ಎನ್ನ
ಅಸುವಳಿದು ಪೋಪಾಗ ಜಿಹ್ವೆಗೊದಗುವಂತೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment