Saturday, July 1, 2017

ಅಂಬುಜದಳಾಕ್ಷಗೆ ಮಂಗಳ (ರಾಗ - ಪೂರ್ವಿ, ತಾಳ - ಏಕ)

ಅಂಬುಜದಳಾಕ್ಷಗೆ ಮಂಗಳ-ಸರ್ವ-
ಜೀವರಕ್ಷಗೆ ಮಂಗಳ

ಜಲಧಿಯೊಳಾಮ್ನಾಯ ತಂದೆಗೆ ಮಂಗಳ
ಕುಲಗಿರಿಯ ತಾಳ್ದಗೆ ಜಯಮಂಗಳ
ನೆಲವ ಕದ್ದಸುರನ ಗೆಲಿದಗೆ ಮಂಗಳ
ಸುಲಭ ನರಸಿಂಹಗೆ ಶುಭಮಂಗಳ || ೧ ||

ವಸುಧೆ ಈರಡಿಗೆಯ್ದಗೆ ಮಂಗಳ
ವಸುಧಿಪರನಳಿದಗೆ ಜಯಮಂಗಳ
ದಶಕಂಧರನನು ಗೆಲಿದಗೆ ಜಯಮಂಗಳ
ಪಶುಗಳ ಕಾಯ್ದಗೆ ಶುಭಮಂಗಳ || ೨ ||

ಪುರತ್ರಯ ವಧುಗಳ ಗೆಲಿದಗೆ ಮಂಗಳ
ತುರಗವಾಹನನಿಗೆ ಜಯಮಂಗಳ
ವರಕಾಗಿನೆಲೆಯಾದಿಕೇಶವಗೆ ಮಂಗಳ
ಸಿರಿಹರಿಗೀಗ ಶುಭಮಂಗಳ || ೩ ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment