Tuesday, July 11, 2017

ಆನೆ ಬಂದಿದೆ ಇದಿಗೊ ಮದ್ದಾನೆ ( ರಾಗ - ಆನಂದಭೈರವಿ, ತಾಳ - ಅಟ )

ಆನೆ ಬಂದಿದೆ ಇದಿಗೊ ಮದ್ದಾನೆ ||  ||
ಜ್ಞಾನಿಗಳೊಳಾಡುವ ಮದ್ದಾನೆ || . ||

ದೇವಕಿಯೊಳು ಪುಟ್ಟಿದಾನೆ ವಸು-
ದೇವನ ಪೆಸರೊಳೈತಂದ ಮದ್ದಾನೆ
ಶ್ರೀವಾಸುದೇವನೆಂಬಾನೆಗೋಪಿ
ದೇವಿಯ ಗೃಹದೊಳಾಡುವ ಪುಟ್ಟಾನೆ ||  ||

ನೀಲವರ್ಣದ ನಿಜದಾನೆಸ್ವರ್ಣ
ಮಾಲೆಗಳಿಟ್ಟು ಮೆರೆವ ಚಲುವಾನೆ
ಶ್ರೀಲೋಲನೆನಿಪ ಪಟ್ಟದಾನೆ ದುಷ್ಟ
ಕಾಳಿಂಗನ ಪೆಡೆಯ ಮೆಟ್ಟಿ ತುಳಿದಾನೆ ||  ||

ಬಾಲೇಂದು ಮುಖದ ಮರಿಯಾನೆ ಕದ್ದು
ಪಾಲನ್ನು ಕುಡಿದ ಮರಿಯಾನೆ
ಕೈಲಿ ಗಿರಿಯನೆತ್ತಿದಾನೆ 
ಕಾಳ್ಕಿಚ್ಚನ್ನು ನುಂಗಿದ ಪಟ್ಟದಾನೆ ||  ||

ಧೇನುಕಾಸುರನ ಕೊಂದಾನೆ
ತನಗೆ ಜೋಡಿಲ್ಲದಿಹ ನಿಜದಾನೆ
ಮಾನವರಿಗೆಲ್ಲ ಸಿಲ್ಕದಾನೆ
ಶೌನಕಾದಿಗಳೊಂದಿಗಿಪ್ಪಾನೆ ||  ||

ಮಲ್ಲರೊಡನೆ ಕಾದಿ ಗೆಲಿದಾನೆ ಕಡು
ಖುಲ್ಲ ಕಂಸನ ಕೆಡಹಿದಾನೆ ವಿದ್ಯೆ ಸಾಂದೀಪ-
ರಲಿ ಕಲಿತ ಮರಿಯಾನೆ
ಸಲೆ ಭಕ್ತರ ಕಾವ ಪುಟ್ಟಾನೆ ||  ||

ತರಳೆ ತುಕ್ಮಿಣಿಯ ತಂದಾನೆಬಹು
ಕರುಣದಿಂ ಪಾಂಡವರ ಪೊರೆದಾನೆ
ವರ ವೇಲಾಪುರದೊಳಿಪ್ಪಾನೆ
ಸಿರಿಯಾದಿಕೇಶವನೆಂಬ ಮದ್ದಾನೆ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment