ತಂ ವಂದೇ ನರಸಿಂಹ ತೀರ್ಥನಿಲಯಂ ಶ್ರೀ ವ್ಯಾಸರಾಟ್ ಪೂಜಿತಂ |
ಧ್ಯಾಯಂತಂ ಮನಸಾ ನರಸಿಂಹಚರಣಂ ಶ್ರೀಪಾದರಾಜಂ ಗುರುಂ ||
ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣ
ಅಖಿಲಗುಣ ಸದ್ಧಾಮ ಮಧ್ವನಾಮ (೨)
ಆವ ಕಚ್ಚಪರೂಪದಿಂದ ಲಂಡೊದಕವ
ಓವಿ ಧರಿಸಿದಶೇಷ ಮೂರುತಿಯನು
ಆವವನ ಬಳಿವಿಡಿದು ಹರಿಯ ಸುರರೈದುವರು
ಆ ವಾಯು ನಮ್ಮ ಕುಲ ಗುರುರಾಯನು
|| ೧ ||
ಜಯ ಜಯ
ಜಗತ್ರಾಣ... (೨)
ಆವವನು ದೇಹದೊಳಗಿರಲು ಹರಿ ನೆಲೆಸಿಹನು
ಆವವನು ತೊಲಗೆ ಹರಿ ತಾ ತೊಲಗುವ
ಆವವನು ದೇಹದ ಒಳಹೊರಗೆ ನಿಯಾಮಕನು
ಆ ವಾಯು ನಮ್ಮ ಕುಲಗುರುರಾಯನು
|| ೨ ||
ಜಯ ಜಯ ಜಗತ್ರಾಣ...
(೨)
ಕರಣಾಭಿಮಾನಿ ಸುರರು ದೇಹವಾ ಬಿಡಲು
ಕುರುಡ ಕಿವುಡಾ ಮೂಕನೆಂದೆನಿಸುವಾ
ಪರಮ ಮುಖ್ಯಪ್ರಾಣ ತೊಲಗಲಾ ದೇಹವನು
ಅರಿತು ಪೆಣವೆಂದು ಪೆಳುವರು ಬುಧಜನ
|| ೩ ||
ಜಯ ಜಯ ಜಗತ್ರಾಣ...
(೨)
ಸುರರೊಳಗೆ ನರರೊಳಗೆ ಸರ್ವಭೂತಗಳೊಳಗೆ
ಪರತರನೆನಿಸಿ ನಿಯಾಮಿಸಿ ನೆಲೆಸಿಹ
ಹರಿಯನಲ್ಲದೆ ಬಗೆಯ ಅನ್ಯರನು ಲೊಕದೊಳು
ಗುರುಕುಲ ತಿಲಕ ಮುಖ್ಯ ಪವಮಾನನು
|| ೪ ||
ಜಯ ಜಯ
ಜಗತ್ರಾಣ... (೨)
ತ್ರೇತೆಯಲಿ ರಘುಪತಿಯ ಸೆವೆಮಾಡುವೆನೆಂದು
ವಾತಸುತ ಹನುಮಂತನೆಂದೆನಿಸಿದ
ಪೋತಭಾವದಿ ತರಣಿ ಬಿಂಬಕ್ಕೆ ಲಂಘಿಸಿದ
ಈತಗೆಣೆಯಾರು ಮೂರ್ಲೊಕದೊಳಗೆ
|| ೫ ||
ಜಯ ಜಯ
ಜಗತ್ರಾಣ... (೨)
ತರಣಿಗಭಿಮುಖವಾಗಿ ಶಬ್ದಶಾಸ್ತ್ರವ ಪಠಿಸಿ
ಉರವಣಿಸಿ ಹಿಂದುಮುಂದಾಗಿ ನಡೆದ
ಪರಮ ಪವಮಾನಸುತ ಉದಯಾಸ್ತ ಶೈಲಗಳ
ಭರದಿಯೈದಿದಗೀತಗುಪಮೆ ಉಂಟೇ || ೬ ||
ಜಯ ಜಯ
ಜಗತ್ರಾಣ... (೨)
ಅಖಿಲ ವೇದಗಳ ಸಾರ ಪಠಿಸಿದನು ಮುನ್ನಲ್ಲಿ
ನಿಖಿಲ ವ್ಯಾಕರಣಗಳ ಇವ ಪಠಿಸಿದ
ಮುಖದಲ್ಲಿ ಕಂಚಿದಪಶಬ್ದ ಇವಗಿಲ್ಲವೆಂದು
ಮುಖ್ಯಪ್ರಾಣನನು ರಾಮನನುಕರಿಸಿದ
|| ೭ ||
ಜಯ ಜಯ
ಜಗತ್ರಾಣ... (೨)
ತರಣಿ ಸುತನನು ಕಾಯ್ದು ಶರಧಿಯನು ನೆರೆ ದಾಟಿ
ಧರಣಿಸುತೆಯಳ ಕಂಡು ದನುಜರೊಡನೆ
ಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳ
ಉರುಹಿ ಲಂಕೆಗೆ ಬಂದ ಹನುಮಂತನು
|| ೮ ||
ಜಯ ಜಯ
ಜಗತ್ರಾಣ... (೨)
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿ
ಶರಧಿಯನು ಕಟ್ಟಿ ಬಲು ರಕ್ಕಸರನು
ಒರೆಸಿ ರಣದಲ್ಲಿ ದಶಶಿರನ ಹುಡಿಗುಟ್ಟಿ ತಾ
ಮೆರೆದ ಹನುಮಂತ ಬಲವಂತ ಧೀರಾ
|| ೯ ||
ಜಯ ಜಯ
ಜಗತ್ರಾಣ... (೨)
ಉರಗ ಬಂಧಕ್ಕೆ ಸಿಲುಕಿ ಕಪಿವರರು ಮೈಮರೆಯೆ
ತರಣಿಕುಲತಿಲಕನಾಜ್ಞೆಯನೆ ತಾಳಿದ
ಗಿರಿಸಹಿತ ಸಂಜೀವನವ ಕಿತ್ತು ತಂದಿತ್ತ
ಹರಿವರಗೆ ಸರಿಯುಂಟೆ ಹನುಮಂತಗೆ
|| ೧೦ ||
ಜಯ ಜಯ
ಜಗತ್ರಾಣ... (೨)
ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆ
ಭಜಿಸಿ ಮೌಕ್ತಿಕದ ಹಾರವನು ಪಡೆದ
ಅಜಪದವಿಯನು ರಾಮ ಕೊಡುವೆನೆನೆ ಹನುಮಂತ
ನಿಜ ಭಕುತಿಯನೆ ಬೇಡಿ ವರವ ಪಡೆದ
|| ೧೧ ||
ಜಯ ಜಯ
ಜಗತ್ರಾಣ... (೨)
ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ
ಸೋಮಕುಲದಲಿ ಜನಿಸಿ ಪಾರ್ಥನೊಡನೆ
ಭೀಮವಿಕ್ರಮ ರಕ್ಕಸರ ಮುರಿದು ಅಟ್ಟಿದ
ಆ ಮಹಿಮ ನಮ್ಮ ಕುಲ ಗುರುರಾಯನು
|| ೧೨ ||
ಜಯ ಜಯ
ಜಗತ್ರಾಣ... (೨)
ಕರದಿಂದ ಶಿಶುಭಾವನಾದ ಭೀಮನ ಬಿಡಲು
ಗಿರಿಯೊಡೆದು ಶತಶೃಂಗವೆಂದೆನಿಸಿತು
ಹರಿಗಳ ಹರಿಗಳಿಂ ಕರಿಗಳ ಕರಿಗಳಿಂ
ಅರೆವ ವೀರನಿಗೆ ಸುರನರರು ಸರಿಯೆ
|| ೧೩ ||
ಜಯ ಜಯ
ಜಗತ್ರಾಣ... (೨)
ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿ
ಹಸಿದುರಗಗಳ ಮ್ಯಾಲೆರಗನದನೊರಸಿದ
ಅರಗಿನಮನೆಯಲ್ಲಿ ಉರಿಯನಿಕ್ಕಲು ವೀರ
ಧರಿಸಿ ಜಾಹ್ನವಿಗೊಯ್ದ ತನ್ನನುಜರ
|| ೧೪ ||
ಜಯ ಜಯ
ಜಗತ್ರಾಣ... (೨)
ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರ
ನಿಲ್ಲದೊರೆಸಿದ ಲೋಕಕಂಟಕರನು
ಬಲ್ಲಿದಸುರರ ಗಲಿದು ದ್ರೌಪದಿಯ ಕೈಪಿಡಿದು
ಎಲ್ಲ ಸುಜನರಿಗೆ ಹರುಷವ ತೋರಿದ
|| ೧೫ ||
ಜಯ ಜಯ
ಜಗತ್ರಾಣ... (೨)
ರಾಜಕುಲವಜ್ರನೆನಿಸಿದ ಮಾಗಧನ ಸೀಳಿ
ರಾಜಸೂಯಾಯಾಗವನು ಮಾಡಿಸಿದನು
ಆಜಿಯೊಳು ಕೌರವರ ಬಲವ ಸವರುವೆನೆಂದು
ಮೂಜಗವರಿಯೆ ಕಂಕಣ ಕಟ್ಟಿದ
|| ೧೬ ||
ಜಯ ಜಯ
ಜಗತ್ರಾಣ... (೨)
ಕಾನನವ ಪೊಕ್ಕು ಕಿಮ್ಮೀರಾದಿಗಳ ಮುರಿದು
ದಾನವರ ಸವರಬೇಕೆಂದು ಬ್ಯಾಗ
ಮಾನನಿಧಿ ದ್ರೌಪದಿಯ ಮನದಿಂಗಿತವನರಿತು
ಮಾನಿನಿಗೆ ಸೌಗಂಧಿಕವನೆ ತಂದ || ೧೭ ||
ಜಯ ಜಯ
ಜಗತ್ರಾಣ... (೨)
ದುರುಳಕೀಚಕನು ದ್ರೌಪದಿಯ ಚೆಲುವಿಕೆಗೆ
ಮರುಳಾಗಿ ಕರೆಕರೆಯ ಮಾಡಲವನ
ಗರಡಿಮನೆಯಲ್ಲಿ ಬರಸಿ ಅವನನ್ವಯವ
ಕುರುಪನಟ್ಟಿದ ಮಲ್ಲ ಕುಲವ ಸದೆದ ||
೧೮ ||
ಜಯ ಜಯ
ಜಗತ್ರಾಣ... (೨)
ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿ
ಓರಂತೆ ಕೌರವರ ಮುರಿದು ಮೆರೆದ
ವೈರಿ ದುಶ್ಯಾಸನನ ರಣದಲ್ಲಿ ಎದೆಗೆಡಹಿ
ವೀರ ನರಹರಿಯ ಲೀಲೆಯ ತೋರಿದ
|| ೧೯ ||
ಜಯ ಜಯ
ಜಗತ್ರಾಣ... (೨)
ಗುರುಸುತನು ಸಂಗರದಿ ನಾರಾಯಣಾಸ್ತ್ರವನು
ಉರವಣಿಸಿ ಬಿಡಲು ಶಸ್ತ್ರವ ಬಿಸುಟದೆ
ಹರಿಯ ಕೃಪೆ ಪಡೆದಿದ್ದ ಭೀಮ ಹುಂಕಾರದಲಿ
ಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ
|| ೨೦ ||
ಜಯ ಜಯ
ಜಗತ್ರಾಣ... (೨)
ಚಂಡವಿಕ್ರಮನು ಗದೆಗೊಂಡು ರಣದಿ ಭೂ
ಮಂಡಲದೊಳಿದಿರಾಂತ ಖಳರನೆಲ್ಲ
ಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನು
ಕಂಡು ನಿಲ್ಲುವರಾರು ತ್ರಿಭುವನದೊಳು
|| ೨೧ ||
ಜಯ ಜಯ
ಜಗತ್ರಾಣ... (೨)
ನಾರಿರೋದನ ಕೇಳಿ ಮನಮರುಗಿ
ಗುರುಸುತನ
ಹಾರಿಹಿಡಿದು ಶಿರೋರತ್ನ ಕಿಟ್ಟಿ ತೆಗೆದ
ನೀರೊಳಗಡಗಿದ್ದ ದುರ್ಯೋಧನನ ಹೊರಗೆಡಹಿ
ಉರುಯುಗ ತನ್ನ ಗದೆಯಿಂದ ಮುರಿದ
|| ೨೨ ||
ಜಯ ಜಯ
ಜಗತ್ರಾಣ... (೨)
ದಾನವರು ಕಲಿಯುಗದೊಳವತರಿಸಿ ವಿಭುದರೊಳು
ವೇನನ ಮತವನರುಹಲದನರಿತು
ಜ್ಞಾನಿ ತಾ ಪವಮಾನ ಭೂತಳದೊಳವತರಿಸಿ
ಮಾನನಿಧಿ ಮಧ್ವಾಕ್ಯನೆಂದೆನಿಸಿದ || ೨೩ ||
ಜಯ ಜಯ
ಜಗತ್ರಾಣ... (೨)
ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿ
ನಿರ್ಭಯದಿ ಸಕಲ ಶಾಸ್ತ್ರಗಳ ಪಠಿಸಿದ
ಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನು
(ಉರ್ವಿಯೊಳು ಆಮ್ನಾಯ ತತ್ತವದ ಮಾರ್ಗವನು)
ಓರ್ವ ಮಧ್ವಮುನಿ ತೋರ್ದ ಸುಜನರ್ಗೆ
(ಸರ್ವ ಸುಜನರ್ಗೆ ಅರುಹಿದನು ಮೋದದಿ) || ೨೪ ||
ಜಯ ಜಯ
ಜಗತ್ರಾಣ... (೨)
ಸರ್ವೇಶ ಹರಿ ವಿಶ್ವ ಎಲ್ಲ ತಾ ಪುಸಿಯೆಂಬ
ದುರ್ವಾದಿಗಳ ಮತವ ನೆರೆ ಖಂಡಿಸಿ
ಸರ್ವೇಶ ಹರಿ ವಿಶ್ವ ಸತ್ಯವೆಂದರುಹಿದ
ಶರ್ವಾದಿಗೀರ್ವಾಣಸಂತತಿಯಲಿ || ೨೫ ||
ಜಯ ಜಯ
ಜಗತ್ರಾಣ... (೨)
ಏಕವಿಂಶತಿ ಕುಭಾಷ್ಯಗಳ ಬೇರನು ತರಿದು
ಶ್ರೀಕರಾರ್ಚಿತನೊಲುಮೆ ಶಾಸ್ತ್ರರಚಿಸಿ
ಲೋಕತ್ರಯದೊಳಿದ್ದ ಸುರರು ಆಲಿಸುವಂತೆ
ಆ ಕಮಲನಾಭಾದಿಯತಿಕರಕೊರೆದ || ೨೬ ||
ಜಯ ಜಯ
ಜಗತ್ರಾಣ... (೨)
ಬದರಿಕಾಶ್ರಮಕೆ ಪುನರಪಿಯೈದಿ ವ್ಯಾಸಮುನಿ
ಪದಕೆರಗಿ ಅಖಿಲವೇದಾರ್ಥಗಳನು
ಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವ
ವೈದಿದ ಮಧ್ವಮುನಿರಾಯಗಭಿವಂದಿಪೆ || ೨೭ ||
ಜಯ ಜಯ
ಜಗತ್ರಾಣ... (೨)
ಜಯಜಯತು ದುರ್ವಾದಿಮತತಿಮಿರಮಾರ್ತಾಂಡ
ಜಯಜಯತು ವಾದಿಗಜಪಂಚಾನನ
ಜಯಜಯತು ಚಾರ್ವಾಕಗರ್ವಪರ್ವತಕುಲಿಶ
ಜಯಜಯ ಜಗನ್ನಾಥ ಮಧ್ವನಾಥ
|| ೨೮ ||
ಜಯ ಜಯ
ಜಗತ್ರಾಣ... (೨)
ತುಂಗಕುಲಗುರುವರನ ಹೃದ್ಕಮಲದಲಿ ನೆಲೆಸಿ
ಭಂಗವಿಲ್ಲದ ಸುಖವ ಸುಜನಕೆಲ್ಲ
ಹಿಂಗದೆ ಕೊಡುವ ಗುರುಮಧ್ವಾಂತರಾತ್ಮಕ
ರಂಗವಿಠ್ಠಲನೆಂದು ನೆರೆ ಸಾರಿರೈ
|| ೨೯ ||
ಜಯ ಜಯ
ಜಗತ್ರಾಣ... (೨)
ಸೋಮಸೂರ್ಯೋಪರಾಗದಿ ಗೋ ಸಹಸ್ರಗಳು
ಭೂಮಿದೇವರಿಗೆ ಸುರನದಿ ತೀರದಿ
ಶ್ರೀ ಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕು
ಈ ಮಧ್ವನಾಮ ಬರೆದೋದಿದರ್ಗೆ
|| ೩೦ ||
ಪುತ್ರರಿಲ್ಲದವರು ಸತ್ಪುತ್ರರೈದುವರು
ಸರ್ವತ್ರದಲಿ ದಿಗ್ವಿಜಯವಹುದು ಸಕಲ
ಶತ್ರುಗಳು ಕೆಡುವರು ಅಪಮೃತ್ಯು ಬರಲಂಜುವುದು
ಸೂತ್ರನಾಮಕನ ಸಂಸ್ತುತಿ ಮಾತ್ರದಿ
|| ೩೧ ||
ಶ್ರೀಪಾದರಾಜ ಪೇಳಿದ ಮಧ್ವನಾಮ
ಸಂತಾಪ ಕಳೆದಖಿಲ ಸೌಖ್ಯವನಿಹುವುದು
ಶ್ರೀಪತಿ ಶ್ರೀಜಗನ್ನಾಥವಿಠ್ಠಲನ ತೋರಿ ಭವ
ಕೂಪಾರದಿಂದ ಕಡೆಹಾಯಿಸುವುದು || ೩೨
||
ಜಯ ಜಯ
ಜಗತ್ರಾಣ... (೨)
ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು
No comments:
Post a Comment