Monday, July 3, 2017

ಅರಸಿನಂತೆ ಬಂಟನೊ ಹನುಮರಾಯ(ರಾಗ - ಕಾಲ್ಯಾಣಿ, ತಾಳ - ಅಟ)

ಅರಸನಂತೆ ಬಂಟನೊ ಹನುಮರಾಯ
ದೊರೆಯಂತೆ ಸೇವಕನೊ ||  ||

ಅರಸನಂತೆ ಬಂಟನೆಂಬುದು ನಿನ್ನೊಳು
ಕುರುಹು ತೋರಿತು ಮೂರುಲೋಕಕೆ ಹನುಮ || . ||

ಒಡೆಯ ಅಂಬುಧಿಯೊಳು ಪೊಕ್ಕು ವೇದವ ತಂದು
ತಡೆಯದೆ ಅಜಗಿತ್ತನೆಂದೆನುತ
ಸಡಗರದಿಂದ ವಾರಿಧಿಯ ದಾಟಿ ಮಹಿಜೆ ಪೆ-
ರ್ಮುಡಿಯ ಮಾಣಿಕವ ರಾಘವಗಿತ್ತೆ ಹನುಮ ||  ||

ಮಂದರಧರ ಗೋವರ್ಧನ ಗಿರಿ ನಲ-
ವಿಂದ ನಿಂದು ನಗೆಹಿದನೆನುತ
ಸಿಂಧುಬಂಧನಕೆ ಸಮಸ್ತ ಪರ್ವತಗಳ೦
ತಂದು ನಳನ ಕೈಯೊಳಗಿತ್ತೆ ಹನುಮ ||  ||

ಸಿರಿ ಕಾಗಿನೆಲೆಯಾದಿಕೇಶವರಾಯನು
ಸುರರಿಗಮೃತವನು ಎರೆದನೆನುತ
ಮೆರೆವ ಗಿರಿಯವಾಸ ಕಪಿಕುಲಸೌಮಿತ್ರಿ-
ಗೆರೆದ ದ್ರೋಣಾದ್ರಿಸಂಜೀವನ ಹನುಮ ||  ||

ಶ್ರೀ ಭರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು

No comments:

Post a Comment